ಚಿತ್ರ: ಹಾಲುಜೇನು
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ಜಿ.ಕೆ.ವೆಂಕಟೇಶ್

ಹಾಲುಜೇನು ಒಂದಾದ ಹಾಗೆ
ನನ್ನ ನಿನ್ನ ಜೀವನ  ||ಪಲ್ಲವಿ||

ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ

||ಪಲ್ಲವಿ||

ಬಿಸಿಲಾಗಲಿ, ಮಳೆಯಾಗಲಿ, ನೆರಳಾಗಿ ನಾನು ಬರುವೆನು ಜೊತೆಗೆ |೨|
ಸವಿಮಾತಲಿ ಸುಖನೀಡುವೆ,ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ, ಸಂತೋಷದ ಪರಿಮಳ ಚೆಲ್ಲಿ |೨|
ಹಾಯಾಗಿರೂ

||ಪಲ್ಲವಿ||

ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಕೊರಗಿದೆ ಚೆಲುವೆ  |೨|
ಇಂದೇತಕೆ ಈ ಮೌನವು, ಹೀಗೇಕೆ ನೀನಿರುವೆ
ನೀನೇತಕೆ ಬಾಡುವೆ ಕೊರಗಿ, ನಾನಿಲ್ಲವೇ ಆಸರೆಯಾಗಿ  |೨|
ಹಾಯಾಗಿರೂ

||ಪಲ್ಲವಿ||
ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ

||ಪಲ್ಲವಿ||

Category: ಹಾಲುಜೇನು ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ